ಬಾಳೊ ಹೆಣ್ಣಿಗೆ ಭೂಮಿ ಚಿಕ್ಕದು…

ಬಾಳೊ ಹೆಣ್ಣಿಗೆ ಭೂಮಿ ಚಿಕ್ಕದು…

ಅಂತಾರಾಷ್ಟ್ರೀಯ ಮಹಿಳಾ ದಿನದ ಶುಭಾಶಯಗಳಂದಿಗೆ ಈ ನನ್ನ ಬರಹ ಶುರು ಮಾಡ್ತೀನಿ. ನನ್ನ ತಾಯಿ, ಸೋದರಿ, ಅಜ್ಜಿ, ಗುರುಗಳು, ಸ್ನೇಹಿತೆಯರು, ಅತ್ತೆ-ಚಿಕ್ಕಮ್ಮಂದಿರು, ಎಲ್ಲರಿಗೂ ಮಹಿಳಾ ದಿನದ ಹಾರ್ದಿಕ ಶುಭಾಶಯಗಳು. ಪ್ರತ್ಯಕ್ಷವಾಗಿಯೋ, ಪರೋಕ್ಷವಾಗಿಯೊ, ನೀವೆಲ್ಲರೂ ಒಂದಿಲ್ಲೊಂದು ರೀತಿಯಲ್ಲಿ ನನ್ನ ಜೀವನದ ಮೇಲೆ ಬಹುವಾಗಿ ಪರಿಣಾಮ ಬೀರಿದ್ದೀರಿ. ಅದಕ್ಕೆ ನಾನು ಋಣಿ. Continue reading “ಬಾಳೊ ಹೆಣ್ಣಿಗೆ ಭೂಮಿ ಚಿಕ್ಕದು…”

ನೈತಿಕ – ಬೌದ್ಧಿಕ – ಸಾಮಜಿಕ ಮೌಲ್ಯಗಳ ಮಂಥನದಲ್ಲಿ ಗ್ರಸ್ತನಾದ ಅವಿನಾಶ

ನೈತಿಕ – ಬೌದ್ಧಿಕ – ಸಾಮಜಿಕ ಮೌಲ್ಯಗಳ ಮಂಥನದಲ್ಲಿ ಗ್ರಸ್ತನಾದ ಅವಿನಾಶ

ಕೆಲವು ವಾರಗಳ ಹಿಂದೆ, ಕರಣಂ ಪವನ್ ಪ್ರಸಾದ್ ಅವರ ಗ್ರಸ್ತ ಕಾದಂಬರಿ ಓದಿದೆ. ಕೆಲಸದ ಒತ್ತಡದಲ್ಲಿ ನನ್ನ ಅನಿಸಿಕೆಗಳನ್ನು ಗೀಚಲು ಸಮಯವಾಗಿರಲಿಲ್ಲ. ಸಿಕ್ಕ ಕೊಂಚ ಸಮಯದಲ್ಲಿ, ಕಾದಂಬರಿಯಲ್ಲಿರುವ ಕೆಲವು ಮುದ್ರಣದೋಷಗಳನ್ನು ಸೂಚಿಸಿದೆ. ಬಹಳ ಮುಕ್ತವಾಗಿ ಪ್ರತಿಕ್ರಿಯಿಸಿದರು, ಮುಂದಿನ ಮುದ್ರಣಕ್ಕೆ ಸಹಾಯವಾಗುವುದು ಎಂದರು. ಆ ರೀತಿ ಪ್ರತಿಕ್ರಿಯಿಸುವುದು ಈಗಿನ ದಿನಗಳಲ್ಲಿ ತುಂಬಾ ವಿರಳವೇ.

ನಾನು ಹಿಂದೆಯೂ ಪವನ್ ಅವರ ಕಾದಂಬರಿ ಓದಿದ್ದೇನೆ. ಅವರ “ನನ್ನಿ” ಬಹಳವಾಗಿ ಕಾಡಿತ್ತು. ನಾನು ಕನ್ನಡ ಸಾಹಿತ್ಯ ಓದಲು ಶುರುವಿಕ್ಕಿ ಸುಮಾರು ೮-೯ ವರ್ಷಗಳಲ್ಲಿ ಭೈರಪ್ಪನವರದ್ದಲ್ಲದೆ ಮತ್ತೊಬ್ಬರ ಕಾದಂಬರಿ ಅಷ್ಟು ಕಾಡಿದ್ದು ಅದೇ ಮೊದಲ ಬಾರಿ. ನನ್ನಿ ಕಾದಂಬರಿಯ ಮೂಲಕ ಅವರ ಬರಹಕ್ಕೆ ಅವರೇ ಬಹು ಎತ್ತರದ ಮಾನದಂಡ ಸ್ಥಾಪಿಸಿದರು. ಇದೇ ನಿರೀಕ್ಷೆಯಲ್ಲಿ ಗ್ರಸ್ತ ಕಾದಂಬರಿ ಕೈಗೆತ್ತುಕೊಂಡೆ. Continue reading “ನೈತಿಕ – ಬೌದ್ಧಿಕ – ಸಾಮಜಿಕ ಮೌಲ್ಯಗಳ ಮಂಥನದಲ್ಲಿ ಗ್ರಸ್ತನಾದ ಅವಿನಾಶ”

ಭೈರಪ್ಪನವರ ಉತ್ತರಕಾಂಡ ಕಾದಂಬರಿ, ನಾನು ಓದಿ ಅರ್ಥಮಾಡಿಕೊಂಡ ಪರಿ…

ಭೈರಪ್ಪನವರ ಉತ್ತರಕಾಂಡ ಕಾದಂಬರಿ, ನಾನು ಓದಿ ಅರ್ಥಮಾಡಿಕೊಂಡ ಪರಿ…

ಭೈರಪ್ಪನವರ ಉತ್ತರಕಾಂಡ ಓದಿ ಮುಗಿಸಿದ 5-6 ದಿನಗಳ ನಂತರವೂ ಅದರ ಗುಂಗಿನಿಂದ ಹೊರಬರಲು ಸಾಧ್ಯವಾಗಿಲ್ಲ… ಸೀತೆಗಾದದ್ದು ಅನ್ಯಾಯ ಎಂಬುದನ್ನು ಒಪ್ಪಿಕೊಳ್ಳಲೇ ಕೊಂಚ ಸಮಯ ಹಿಡಿಯಿತು. ಚಿಕ್ಕಂದಿನಿಂದಲೂ ರಾಮನನ್ನು ದೇವರು ಎಂದು ಪೂಜಿಸಿ, ನನ್ನ ಅಮ್ಮ ಅಜ್ಜಿಯರು ಹೇಳುತ್ತಿದ್ದಂತೆ ರಾಮನಂಥ ಗಂಡನೇ ನನಗೂ ಸಿಗಲಿ ಎಂಬ ಭಾವನೆಗಳೊಂದಿಗೆ ಬೆಳೆದವಳಿಗೆ ರಾಮನ ಇನ್ನೊಂದು ಮುಖ ದರ್ಶನವಾದಂತಾಗಿದೆ.

ಏಕಪತ್ನೀವ್ರತಸ್ಥ, ಮರ್ಯಾದಪುರುಷೋತ್ತಮ, ಅನಂತಗುಣ, ದಯಾಸಾರ ಎಂಬೆಲ್ಲ ಹೆಸರುಗಳಿಂದ ಕರೆಯಲ್ಪಡುವವನಲ್ಲೂ ನ್ಯೂನತೆಗಳಿರಬಹುದು, ಅಪೂರ್ಣತೆಯು ಸಹಜ ಎಂದು ಒಪ್ಪಿಕೊಳ್ಳಲು ಕಷ್ಟವೇ ಸರಿ. Continue reading “ಭೈರಪ್ಪನವರ ಉತ್ತರಕಾಂಡ ಕಾದಂಬರಿ, ನಾನು ಓದಿ ಅರ್ಥಮಾಡಿಕೊಂಡ ಪರಿ…”