ಒಂದು ಮೊಟ್ಟೆಯ ಕಥೆ – Bald is beautiful

ಒಂದು ಮೊಟ್ಟೆಯ ಕಥೆ – Bald is beautiful

ಸಿನಿಮಾ ಶೀರ್ಷಿಕೆಯೇ ಸೀದಾ ಸಾದಾ ವಿಷಯ ಏನೆಂದು ಹೇಳುತ್ತೆ, ಬೋಳು ತಲೆಯೊಬ್ಬರ ಕಥೆಯಿದು ಅಂತ. ಸಿನಿಮಾದ ಪ್ರಚಾರ ತುಣುಕು ತುಂಬಾ ತಮಾಷೆಯಾಗಿತ್ತು, ಖಂಡಿತ ನೋಡ್ಬೇಕು ಅಂತ ಆಗಲೇ ಅನ್ನಿಸಿತ್ತು. ಸರಿ ನೆನ್ನೆ ಭಾನುವಾರ, ಸಿನಿಮಾ ನೋಡೋಕೆ ಹೋಗಿದ್ದ್ವಿ. ಒಂದು ಮೊಟ್ಟೆಯ ಕಥೆ ಸಿನಿಮಾ ನೋಡಕ್ಕೆ ಬಂದಿದ್ದೀವಿ ಅಂತ ಮುಖಪುಸ್ತಕದ ಗೋಡೆಯಮೇಲೆ ಬರೆದಿದ್ದೆ. ಸುಮಾರು ತೊಂಬತ್ತು ಜನ ಆ ಸ್ಟೇಟಸ್ಸನ್ನು ಲೈಕ್ ಮಾಡಿದ್ದಾರೆ. ನಾ ಸಿನಿಮಾ ನೋಡೋಕೆ ಹೋಗಿದ್ದೀನಿ ಅಂದ್ರೆ ಇಷ್ಟು ಜನಕ್ಕೆ ಯಾಕಪ್ಪ ಸಂತೋಷ ಅಂದ್ಕೋಡ್ರಾ? ವಿಷಯ ಅದಲ್ಲ, Continue reading “ಒಂದು ಮೊಟ್ಟೆಯ ಕಥೆ – Bald is beautiful”

ದಯವಿಟ್ಟು ಗಮನಿಸಿ – ಸಂಚಾರಿ ಬರ್ತಿದಾನೆ

ದಯವಿಟ್ಟು ಗಮನಿಸಿ – ಸಂಚಾರಿ ಬರ್ತಿದಾನೆ

ಮೊನ್ನೆಯಷ್ಟೇ ಕನ್ನಡದ ಬಹು ನಿರೀಕ್ಷಿತ ಸಿನಿಮಾ, “ದಯವಿಟ್ಟು ಗಮನಿಸಿ” ಚಿತ್ರದ ಸಂಚಾರಿ ಹಾಡಿನ ದೃಶ್ಯ ಬಿಡುಗಡೆಯಾಗಿದೆ. ಸಿನಿಮಾದ ಬಗ್ಗೆ ಇನ್ನಷ್ಟು ಕುತೂಹಲ ಹುಟ್ಟಿಸಿದೆ. ನಾನು ಹಿಂದೆಯೂ ಒಮ್ಮೆ ನನ್ನ ಬ್ಲಾಗ್-ನಲ್ಲಿ ಬರೆದಿದ್ದೆ. ಕನ್ನಡದಲ್ಲಿ ಒಳ್ಳೆ ಸಿನಿಮಾಗಳೇ ಬರೊಲ್ಲ ಅಂತ ಮೂಗು ಮುರಿಯುವರಿಗೆ ಉತ್ತರವೋ ಎಂಬಂತೆ ಬಹಳಷ್ಟು ಒಳ್ಳೆ ಚಿತ್ರಗಳು ಕಳೆದ ವರ್ಷ ತೆರೆಕಂಡಿದ್ದವು. ಹೀಗೆ ಹಲವಾರು ಸಿನಿಮಾಗಳು ಪ್ರೇಕ್ಷಕರಿಂದ ಸೈಯೆನ್ನಿಸಿಕೊಳ್ಳುವುದಲ್ಲದೇ, ಕನ್ನಡ ಚಿತ್ರರಂಗವನ್ನೇ ಹೊಸ ಮಜಲು ಮುಟ್ಟಿಸಿದೆ. Continue reading “ದಯವಿಟ್ಟು ಗಮನಿಸಿ – ಸಂಚಾರಿ ಬರ್ತಿದಾನೆ”

೨೦೧೬ ನೇ ಸಾಲಿನ ನನ್ನ ಮೆಚ್ಚಿನ ಚಿತ್ರ – ರಾಮ ರಾಮರೇ

೨೦೧೬ ನೇ ಸಾಲಿನ ನನ್ನ ಮೆಚ್ಚಿನ ಚಿತ್ರ – ರಾಮ ರಾಮರೇ

ಫಿಲ್ಮೀಬೀಟ್ ಓದುಗರ ಆಯ್ಕೆ 2016ನೇ ಸಾಲಿನ “ವಿಶಿಷ್ಟ” ಚಿತ್ರವಾಗಿ “ರಾಮರಾಮರೇ” ಚಿತ್ರವು ಆಯ್ಕೆಯಾಗಿದೆಯಂತೆ. ಒನ್ ಇಂಡಿಯಾ ಫಿಲ್ಮಿಬೀಟ್ ವತಿಯಿಂದ ಪ್ರಶಸ್ತಿಯೂ ಪ್ರದಾನವಾಗಿದೆಯಂತೆ. ಚಿತ್ರತಂಡದ ಎಲ್ಲರಿಗೂ ಅಭಿನಂದನೆಗಳು. ನಮ್ಮ ಕನ್ನಡ ಸಿನಿಮಾ ಗೆದ್ದರೆ ನಿಜವಾಗ್ಲೂ ಖುಷಿ ಆಗತ್ತೆ.

೨೦೧೬ ರಲ್ಲಿ ಸಾಕಷ್ಟು ಒಳ್ಳೆ ಕನ್ನಡ ಸಿನಿಮಾಗಳು ಬಿಡುಗಡೆಯಾದವು. U-turn, ಗೋಧಿ ಬಣ್ಣ ಸಾಧರಣ ಮೈಕಟ್ಟು, ಕಿರಗೂರಿನ ಗಯ್ಯಾಳಿಗಳು, ತಿಥಿ, ನೀರ್ ದೋಸೆ, ಸಿಂಪಲ್ಲಾಗ್ ಇನ್ನೊಂದ್ ಲವ್ ಸ್ಟೋರಿ, ರಿಕ್ಕಿ, ದೇವರ ನಾಡಲ್ಲಿ ಹೀಗೆ ಹಲವಾರು ಪ್ರಕಾರದ ಸಿನಿಮಾಗಳು ತೆರೆಕಂಡವು. Continue reading “೨೦೧೬ ನೇ ಸಾಲಿನ ನನ್ನ ಮೆಚ್ಚಿನ ಚಿತ್ರ – ರಾಮ ರಾಮರೇ”