ಒಂದಾನೊಂದು ಕಾಲದಲ್ಲಿ ಇಬ್ಬರು ರಾಜಕುಮಾರಿಯರಿದ್ದರು. ಅದು ಬೇರೆ ಯಾರು ಅಲ್ಲ, ನನ್ನ ಅಕ್ಕ ಮತ್ತು ನಾನು 🙂 ಹಾಗೆ ಸುಮ್ಮನೆ ಕಾಲೆಳೆಯೋಣಾಂತ ಬರೆದೆ ಅಷ್ಟೆ. ಸರಿ, ಕಥೆ ಶುರು ಮಾಡೇ ಬಿಡ್ತೇನೆ ಕೇಳಿ.

ನಾನು ಆಗ ಎರಡನೇ ಕ್ಲಾಸ್ ಇರಬಹುದು, ಅಂದ್ರೆ ನನ್ನ ಅಕ್ಕ ೪ನೇ ಕ್ಲಾಸು. ನಮ್ಮ ಮನೆಯಲ್ಲಿ ಬಹುಶಃ ನಾವೇ ಮೊದಲು ಆಂಗ್ಲ ಮಾಧ್ಯಮದ ಶಾಲೆಗೆ ಸೇರಿದ್ದು. ಕೆಲವರು ಅದಕ್ಕೆ ಹುಬ್ಬೇರಿಸಿದ್ದರು. ನಿಜವಾಗ್ಲೂ ಆಂಗ್ಲ ಮಾಧ್ಯಮದ ಶಾಲೆಯ ವ್ಯತ್ಯಾಸ ನಮಗೆ ಯಾವತ್ತೂ ಗೊತ್ತಾಗಿರಲಿಲ್ಲ. ಯಾಕಂದ್ರೆ ಅಲ್ಲಿ ಯಾರು ಆಂಗ್ಲ ಭಾಷೆಯಲ್ಲಿ ಮಾತಾಡ್ತಿರಲಿಲ್ಲ, ಅದರ ಪರಿಚಯವೇ ನಮಗೆ ಸರಿಯಾಗಿ ಆಗಿರಲಿಲ್ಲ. ಆದ್ರೂ ಏನೊ ಎಲ್ಲರೂ “ನೀನು english medium ಅಂತೆ ಹೌದಾ” ಅಂತ ಕೇಳಿದ್ರೆ ಸ್ವಲ್ಪ ಹೆಮ್ಮೆ ಪಡ್ತಿದ್ದ್ವಿ. ಇಷ್ಟೆಲ್ಲಾ ಕೇಳ್ತಿದ್ದಾರೆ ಅಂದ್ರೆ ಒಂದು ನಾಲ್ಕು ಮಾತಾದ್ರು ಇಂಗ್ಲೀಷಲ್ಲಿ ಆಡೋದು ಬೇಡ್ವೇ?

ಒಮ್ಮೆ ರಜಾ ದಿನಗಳಲ್ಲಿ ದೊಡ್ಡಪ್ಪನ ಮನೆಗೆ ಹೋಗಿದ್ದೆವು. ಎಷ್ಟೇ ಹೊತ್ತು ಆಟವಾಡಿದರು, ಊಟ-ತಿಂಡಿಗೆ ಮಾತ್ರ ಸರಿಯಾದ ಸಮಯಕ್ಕೆ ಮನೆಗೆ ಬರಬೇಕು ಅಂತ ದೊಡ್ಡಪ್ಪ ಕಟ್ಟುನಿಟ್ಟಾಗಿ ಹೇಳಿದ್ದರು. ದೊಡ್ಡಮ್ಮ ಮನೆಯ ಮುಂದಿನ ಬಾಗಿಲನ್ನು ತೆರೆದೇ ಇರುತ್ತಿದ್ದರು, ನಾವು ಆಗಾಗ್ಗೆ ಬಗ್ಗಿ ಗಡಿಯಾರ ನೋಡಲು ಸಹಾಯವಾಗಲೆಂದು. ಮನೆಯ ಮುಂದೆಯೇ ಆಡುತ್ತಿದ್ದ ನಾವು ಊಟದ ಸಮಯವಾಗಿದೆಯೆಂದು ಆಟ ನಿಲ್ಲಿಸಿ ಮನೆಯ ಕಡೆಗೆ ಓಡುತ್ತಿದ್ದೆವು; ಅಕ್ಕ ಮುಂದೆ, ನಾನು ಹಿಂದೆ. ಅವಳು ಗೇಟ್ ತೆಗೆದು ಒಳಗೆ ಹೋಗುತ್ತಿದ್ದಂತೆಯೇ, last is gate, last is gate ಎಂದು ಕೂಗಿಕೊಂಡು ಒಳಗೆ ಓಡಿದಳು. ನನಗೆ ಆಶ್ಚರ್ಯ, ಈರ್ಶೆ ಎಲ್ಲವೂ ಒಟ್ಟಿಗೆ ಉಕ್ಕಿ ಬಂದವು. ಇವಳೆಲ್ಲಿಂದ ಹೀಗೆ ಇಂಗ್ಲೀಷ್ ಕಲಿತಳು ಅಂತ ಆಶ್ಚರ್ಯವೂ, ಛೆ ನನಗಿಂತ ಮುಂಚೆ ಇವಳೆ ಎಲ್ಲರ ಮುಂದೆ ಇಂಗ್ಲೀಷ್ ಮಾತಾಡಿದಳಲ್ಲ ಅಂತ ಈರ್ಶೆಯೂ. ಅಷ್ಟು ಯೋಚನೆ ಬರುವಷ್ಟರಲ್ಲಿ ಇನ್ನೊಂದು ವಿಷಯ ಹೊಳೆಯಿತು. ಅರೆ, ಶಾಲೆಗೆ ವಾಪಸ್ ಹೋದಮೇಲೆ ನಾನು ನನ್ನ ಸ್ನೇಹಿತರ ಮುಂದೆ ಇಂಗ್ಲೀಷಿನಲ್ಲಿ ಮಾತನಾಡಿ ಗಮನ ಸೆಳೆಯಬಹುದಲ್ಲ ಎನ್ನಿಸಿ ಖುಷಿಯಾಗಿ ಒಳಗೆ ನಡೆದೆ. ಅವಳು ಎಷ್ಟು confident ಆಗಿ ಅದನ್ನು ಹೇಳಿದ್ದಳು ಅಂದ್ರೆ, ಎಷ್ಟೋ ವರ್ಷಗಳು ನಾನು ಅದೇ ಸರಿಯಾದ ಅನುವಾದವೆಂದು ನಂಬಿದ್ದೆ.

ಅಷ್ಟಕ್ಕೂ ಅವಳು ಅಂದದ್ದೇನು ಅಂತ ಯೋಚಿಸ್ತಾ ಇದ್ದೀರ? Last is gate ಅಂದ್ರೆ, ಕೊನೆಯಲ್ಲಿ ಬರುವವರು ಗೇಟ್ ಹಾಕಿಕೊಂಡು ಬರಬೇಕು ಅಂತ!! 🙂

– ಧರಿತ್ರೀ

Advertisements

2 thoughts on “Last is gate!

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s