ಮೊನ್ನೆಯಷ್ಟೇ ಕನ್ನಡದ ಬಹು ನಿರೀಕ್ಷಿತ ಸಿನಿಮಾ, “ದಯವಿಟ್ಟು ಗಮನಿಸಿ” ಚಿತ್ರದ ಸಂಚಾರಿ ಹಾಡಿನ ದೃಶ್ಯ ಬಿಡುಗಡೆಯಾಗಿದೆ. ಸಿನಿಮಾದ ಬಗ್ಗೆ ಇನ್ನಷ್ಟು ಕುತೂಹಲ ಹುಟ್ಟಿಸಿದೆ. ನಾನು ಹಿಂದೆಯೂ ಒಮ್ಮೆ ನನ್ನ ಬ್ಲಾಗ್-ನಲ್ಲಿ ಬರೆದಿದ್ದೆ. ಕನ್ನಡದಲ್ಲಿ ಒಳ್ಳೆ ಸಿನಿಮಾಗಳೇ ಬರೊಲ್ಲ ಅಂತ ಮೂಗು ಮುರಿಯುವರಿಗೆ ಉತ್ತರವೋ ಎಂಬಂತೆ ಬಹಳಷ್ಟು ಒಳ್ಳೆ ಚಿತ್ರಗಳು ಕಳೆದ ವರ್ಷ ತೆರೆಕಂಡಿದ್ದವು. ಹೀಗೆ ಹಲವಾರು ಸಿನಿಮಾಗಳು ಪ್ರೇಕ್ಷಕರಿಂದ ಸೈಯೆನ್ನಿಸಿಕೊಳ್ಳುವುದಲ್ಲದೇ, ಕನ್ನಡ ಚಿತ್ರರಂಗವನ್ನೇ ಹೊಸ ಮಜಲು ಮುಟ್ಟಿಸಿದೆ. ಸಾಕಷ್ಟು ಯುವ ಪ್ರತಿಭೆಗಳು, ಸಿನಿಮಾದ ಎಲ್ಲಾ ಪ್ರಕಾರಗಳಲ್ಲಿಯೂ ಒಂದು ಹೊಸ ಅಲೆಯೆಬ್ಬಿಸಿದ್ದಾರೆ. ವಿಷೇಶವೆಂದರೆ ನಮ್ಮ ಯುವ ಪ್ರತಿಭೆಗಳು, ಲಾಭಮಾಡಿಕೊಳ್ಳುವ ಉದ್ದೇಶದಿಂದ ದೂರವಿದ್ದು, ಕನ್ನಡದಲ್ಲಿ ಒಳ್ಳೆ ಸಿನಿಮಾ ಮಾಡಬೇಕೆಂಬ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ. ಪ್ರಾಯಶಃ ಈ ಪ್ರಾಮಾಣಿಕತೆಯೇ ಪ್ರಾಯೋಗಿಕ ಪ್ರಯತ್ನಗಳಿಗೆ ಪುಷ್ಟಿ ನೀಡುತ್ತದೇನೊ.

ದಯವಿಟ್ಟು ಗಮನಿಸಿ, ಗೆಳೆಯ ರೋಹಿತ್ ಪದಕಿಯ ಚೊಚ್ಚಲ ನಿರ್ದೇಶನ. ಚಿತ್ರದ ಸಂಭಾಷಣೆ ಕೂಡಾ ಅವರದ್ದೇ. ಈ ಹಿಂದೆಯೂ ರೋಹಿತ್ ಚಿತ್ರಸಂಭಾಷಣೆಯನ್ನು ಬರೆದಿದ್ದಾರೆ. “ಆಕೆ” ಚಿತ್ರಕ್ಕೆ ಕೂಡ ಅವರು ಸಂಭಾಷಣೆ ಬರೆದಿದ್ದರು. ಆಟಗಾರ ಸಿನಿಮಾಕ್ಕೆ ಸಾಹಿತ್ಯ-ಸಂಭಾಷಣೆಗಳನ್ನು ಬರೆದಿರುವುದೂ ರೋಹಿತ್ ಪದಕಿ. ಅವರ ಕೌಶಲ್ಯ, ಆಟಗಾರ ಸಿನಿಮಾದಲ್ಲಿ ಗಮನಾರ್ಹ.

IMG_0392

ಸಂಚಾರಿ ಹಾಡಿಗೆ ಬಂದರೆ, ಹಾಡಿನ ಸಂಗೀತ ಸಂಯೋಜನೆ ಅನೂಪ್ ಸೀಲಿನ್ ಅವರದ್ದು. ತುಂಬಾ ಕಾಡುವಂತಹ ರಾಗ. ಎರಡು ದಿನದಿಂದ ಹಲವು ಬಾರಿ ಕೇಳಿದ್ದೇನೆ. ಹಾಡಿನ ಸಾಹಿತ್ಯದಲ್ಲಿನ ವಿಷೇಶತೆಯ ಬಗ್ಗೆ, ಸಿನಿಮಾ ನೋಡಿದ ಮೇಲೆ ಬರೆಯುವುದು ಸೂಕ್ತ ಅಂತ ಭಾವಿಸುತ್ತೇನೆ. I wish to listen to others’ perception too. ಆದರೂ ಇಲ್ಲಿ ಒಂದು ಸುಳಿವು ಕೊಡಬಹುದು, ಇಡೀ ಹಾಡು, ಆತ್ಮ-ಪರಮಾತ್ಮಗಳ ನಡುವಿನ ಸಂಭಾಷಣೆ. ಅದರ ಪೂರ್ಣ ಅರಿವು ಸಿನಿಮಾ ನೋಡಿದಮೇಲೆ ಆಗಬಹುದೇನೋ. ಹಾಡು ಬಿಡುಗಡೆಯಾದ ನಂತರ, ನನ್ನ ಗೆಳೆಯರು ಹಲವರಿಗೆ ಹಾಡು ನೋಡಿ ಅಭಿಪ್ರಾಯ ತಿಳಿಸಲು ಕೋರಿದ್ದೆ. ಕನ್ನಡ ಗೊತ್ತಿದ್ದವರು, ಗೊತ್ತಿಲ್ಲದವರು ಎಲ್ಲರೂ ಮೆಚ್ಚಿಗೆ ವ್ಯಕ್ತ ಪಡಿಸಿದ್ದಾರೆ. ನನ್ನ ಗೆಳೆಯ ವೃಂದದಲ್ಲಿರುವ ಹಲವು ಸಂಚಾರಿ/ಅಲೆಮಾರಿಗಳು “ಸಿನಿಮಾದ ಕಥೆ ಏನಿದೆಯೋ ಗೊತ್ತಿಲ್ಲ, ಆದ್ರೆ I could instantly connect with the video” ಅಂದಿದ್ದಾರೆ. ಅಲ್ಲದೆ ಹಾಡಿರುವವರು ವಿಜಯ್ ಪ್ರಕಾಶ್ ಅಂದ್ಮೇಲೆ ಕೇಳ್ಬೇಕೆ. ನನ್ನ ಅಚ್ಚುಮೆಚ್ಚಿನ ಗಾಯಕ. ರಾಗ ಸಂಯೋಜನೆ ಎಷ್ಟು ಕಾಡುವ ಹಾಗಿದೆಯೋ, ಅವರ ಕಂಠವೂ ಅಷ್ಟೇ ಕಾಡುವಂತಿದೆ.

ಚಿತ್ರ ಜೂನ್ ನಲ್ಲಿ ತೆರೆಕಾಣಲಿದ್ದು, ಸಂಚಾರಿ ಹಾಡಿನ ಬಿಡುಗಡೆಯ ನಂತರ ನಿರೀಕ್ಷೆ ಇನ್ನೂ ಜಾಸ್ತಿಯಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ, ಚಿತ್ರದ ನಾಯಕ ಅವಿನಾಶ್ ಷಟಮರ್ಶನ್, ತೆರೆಯ ಮೇಲೆ ಬಹಳ ಆಶಾದಾಯಕವಾಗಿ ಕಾಣಿಸ್ತಾರೆ. ಆತ ರಂಗಭೂಮಿಯ ಹಿನ್ನೆಲೆಯಿಂದ ಬಂದವರಂತೆ. ಒಟ್ಟಾರೆ ಸಿನಿಮಾ ಹಲವು ವಿಷಯಗಳಲ್ಲಿ ಕಾತರ ಮೂಡಿಸಿದೆ. “ದಯವಿಟ್ಟು ಗಮನಿಸಿ” ಚಿತ್ರದ ಸಂಚಾರ ಯಶಸ್ವಿಯಾಗಲಿ ಅಂತ ಹಾರೈಸುತ್ತಾ, ಚಿತ್ರ ತೆರೆಕಾಣುವುದನ್ನು ಕಾಯಬೇಕಿದೆ. Wish you all the best Rohit!

– ಧರಿತ್ರೀ

Advertisements

One thought on “ದಯವಿಟ್ಟು ಗಮನಿಸಿ – ಸಂಚಾರಿ ಬರ್ತಿದಾನೆ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s