ನಾಟಿ ಕೊತ್ತಂಬರಿ

ಸುಮ್ಮನೆ ಹೊಟ್ಟೆ ಬಿರಿಯ ತಿಂತಾರೆ ಅಂತ “ಬ್ರಾಹ್ಮಣೋ ಭೋಜನ ಪ್ರಿಯಾಃ” ಅಂತಾರೆ ಅನ್ನ್ಕೋಬೇಡಿ. ಅಡಿಗೆ ತಿಂಡಿಗಳು ಹೀಗೇ ಇರಬೇಕು, ತಿಂಡಿಯ ಬಣ್ಣ, ಹದ ಇಂತಿಷ್ಟೇ ಇರಬೇಕು, ಒಗ್ಗರಣೆಯಲ್ಲಿ ಎಲ್ಲಾ ಸಾಸಿವೆ ಸಿಡಿದಿದೆಯೋ ಇಲ್ಲವೋ ಅನ್ನೋ ಮಟ್ಟಕ್ಕೆ ಊಟ-ತಿಂಡಿಗಳ ಬಗ್ಗೆ ಆಸಕ್ತಿ ನಮಗೆ. We deeply love food! ಇಷ್ಟೆಲ್ಲಾ ಇದ್ದೋರು ಇನ್ನು ಅಡಿಗೆಗೆ ಬಳಸೊ ಪದಾರ್ಥಗಳ ಬಗ್ಗೆ ನಿರ್ದಿಷ್ಟವಾಗಿರೋದಿಲ್ಲ್ವೇ? ನಮಗೆ ಬೇಕಾದ ರೀತಿಯಲ್ಲಿ ಪದಾರ್ಥಗಳು ಒಂದು ಅಂಗಡಿಯಲ್ಲಿ ಸಿಕ್ಕಿಲ್ಲ ಅಂದ್ರೆ, ೪ ಕಡೆ ತಿರುಗಿಯಾದರೂ ಬೇಕದ್ದನ್ನೇ ಹುಡುಕಿ ತರುವ ಚಟ. ನಾಟಿ ಕೊತ್ತಂಬರಿ ಸಿಗದೆ ಹೋದರೆ ಅಡಿಗೆಮನೆಗೆ ಬರ ಬಂದಿದೆಯೇನೋ ಅನ್ನೋ ಫೀಲಿಂಗು ನಮ್ಗೆ. ತಿಳೀ ಸಾರಿಗೆ ತುಪ್ಪದ ಒಗ್ಗರಣೆ ಜೊತೆ ನಾಟಿ ಕೊತ್ತಂಬರಿ ಕೊಡುವ ಘಮವನ್ನು ಆಘ್ರಾಣಿಸುವ ಆನಂದವೇ ಬೇರೆ.

ಒಮ್ಮೆ ನನ್ನ ಸೋದರತ್ತೆ ಮನೆಯಲ್ಲಿ ಎಲ್ಲರೂ ಸೇರಿದ್ದೆವು. ಎಲ್ಲರೂ ಒಂದು ಕಡೆ ಸೇರೋದೆ ನಮಗೆ ಹಬ್ಬ. ಬಾಯಿ ಚಪಲಕ್ಕೆ ಸಂತೃಪ್ತಿಯಾಗುವಷ್ಟು ಮಾತೂ-ಊಟವೂ ಖಚಿತ. ಮಧ್ಯಾಹ್ನದ ಅಡಿಗೆಗೆ ಒಂದಿಷ್ಟು ತರಕಾರಿ-ಸಾಮಾನು ತರಲು ನನ್ನ ಮಾವ ಮತ್ತು ನಾನು ಹೊರಡುವುದರಲ್ಲಿದ್ದೆವು. ಅಲ್ಲೇ ಇದ್ದ ನನ್ನ ತಮ್ಮ ಪಮ್ಮು ನಾನೂ ಬರ್ತೀನಿ ಅಂತ ಹಟ ತೆಗೆದ. ಆಚೆ ಹೋದರೆ ಅಂಗಡಿಯಲ್ಲಿ ಏನಾದರೂ ಗಿಟ್ಟಿಸಬಹುದು ಅನ್ನೋ ಲೆಕ್ಕಾಚಾರ ಅವನದು. ಅವನಿನ್ನು ಚಿಕ್ಕವನಿದ್ದರಿಂದ ಮೂರೂ ಜನ ಸ್ಕೂಟರ್ ಏರಿ ಮಾರುಕಟ್ಟೆಗೆ ಹೊರಟೆವು.

ಚೀಟಿಯಲ್ಲಿ ಬರೆದು ಕೊಟ್ಟಿದ್ದ ಎಲ್ಲಾ ಪದಾರ್ಥಗಳೂ ಸಿಕ್ಕಿದ್ದವು, ಒಂದು ಮುಖ್ಯವಾದದ್ದನ್ನು ಹೊರತು. ಆಗಲೇ ಹೇಳಿದೆನಲ್ಲ, ನಾಟಿ ಕೊತ್ತಂಬರಿಯ ಪ್ರಾಮುಖ್ಯತೆ, ಅದೇ ಸಿಕ್ಕಿರಲಿಲ್ಲ ನೋಡಿ. ಮಾರುಕಟ್ಟೆಯೆಲ್ಲಾ ಅಲೆದೆವು. ಸಿಕ್ಕ ಸಿಕ್ಕ ಅಂಗಡಿಗಳ ಮುಂದೆಲ್ಲಾ ಗಾಡಿ ನಿಲ್ಲಿಸಿ ಮಾವ ವಿಚಾರಿಸಿವುದು, ನಾವು ಮಿಕ್ಕ ಸಮಾನಿರುವು ಚೀಲವನ್ನು ಬಹಳ ಎಚ್ಚರಿಕೆಯಿಂದ ಕಾಯುತ್ತಾ ಗಾಡಿಯಮೇಲೆ ಕೂತಿರುವುದು. ಸಾಕಷ್ಟು ಕಡೆ ಹುಡುಕಿ ಅವರೂ ಬಳಲಿದ್ದರು. ಒಂದು ಕೊನೇ ಪ್ರಯತ್ನವೆಂಬಂತೆ ತಳ್ಳೋ ಗಾಡಿಯೊಂದರ ಮುಂದೆ ನಿಲ್ಲಿಸಿದರು.


ಗಾಡಿ ಇಳಿದು ನಾನೆ ಹೋಗಿ ಕೇಳ್ಕೊಂಡು ಬರ್ತೀನಿ ಅಂತ ನನ್ನ ತಮ್ಮ ಹೊರಟ. ಹೋದವನೇ “ತುಂಟ ಕೊತ್ತಂಬರಿ ಇದೆಯಾ” ಅಂತ ಕೇಳಿದ. ಗಾಡಿಯವ ಕಕ್ಕಾಬಿಕ್ಕಿ! ನಾ ಅಂಥಾ ಕೊತ್ತಂಬರಿಯ ಬಗ್ಗೆ ಕೇಳೆ ಇಲ್ಲವಲ್ಲಪ್ಪ ಅಂದ. ಅಷ್ಟರಲ್ಲಿ ನನ್ನ ಮಾವ, ತಲೆಹರಟೆ ತುಂಟ ಕೊತ್ತಂಬರಿ ಅಂದ್ರೆ ಏನೋ ಅಂತ ಜೋರು ಮಾಡಿದರು. “ಅಣ್ಣಾ ಈ ಗಾಡಿಯವರಿಗೆ ಇಂಗ್ಲೀಷು ಬರೊಲ್ಲವೇನೊ ಅಂದ್ಕೊಂಡು ಹಾಗೆ ಕೇಳಿದೆ, ಇಂಗ್ಲೀಷಿನಲ್ಲಿ ನಾಟಿ (naughty) ಅಂದ್ರೆ ತುಂಟ ಅಂತ ಅರ್ಥ ಅಲ್ವಾ” ಅಂದ. ಮಾವ ಶಾಕ್, ಪಮ್ಮು ರಾಕ್ಸ್!

ನಾವು ಕಾಲೇಜಿನಲ್ಲಿದ್ದಾಗ ಹೀಗೆ ಇಂಗ್ಲೀಷಿನಿಂದ ಕನ್ನಡಕ್ಕೆ ನೇರ ಭಾಷಾಂತರ ಮಾಡಲು ಹೋಗಿ ಆಗಿದ್ದ ಇನ್ನೊಂದು ಅವಾಂತರದ ಬಗ್ಗೆ ಮತ್ತೊಮ್ಮೆ ಬರೀತೀನಿ.

Advertisements

2 thoughts on “ನಾಟಿ ಕೊತ್ತಂಬರಿ

  1. ಒಳ್ಳೆ ತಮಾಷೆಯಾಗಿದೆ. ಹಿಂದಿನ ಕಾಲದ ನಾಟಿಯೇ ಈಗಿನ ಕಾಲದ ಆರ್ಗಾನಿಕ್ ಆಗಿ ಮಾರ್ಪಾಟಾಗಿರಬೇಕು.

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s