ಫಿಲ್ಮೀಬೀಟ್ ಓದುಗರ ಆಯ್ಕೆ 2016ನೇ ಸಾಲಿನ “ವಿಶಿಷ್ಟ” ಚಿತ್ರವಾಗಿ “ರಾಮರಾಮರೇ” ಚಿತ್ರವು ಆಯ್ಕೆಯಾಗಿದೆಯಂತೆ. ಒನ್ ಇಂಡಿಯಾ ಫಿಲ್ಮಿಬೀಟ್ ವತಿಯಿಂದ ಪ್ರಶಸ್ತಿಯೂ ಪ್ರದಾನವಾಗಿದೆಯಂತೆ. ಚಿತ್ರತಂಡದ ಎಲ್ಲರಿಗೂ ಅಭಿನಂದನೆಗಳು. ನಮ್ಮ ಕನ್ನಡ ಸಿನಿಮಾ ಗೆದ್ದರೆ ನಿಜವಾಗ್ಲೂ ಖುಷಿ ಆಗತ್ತೆ.

೨೦೧೬ ರಲ್ಲಿ ಸಾಕಷ್ಟು ಒಳ್ಳೆ ಕನ್ನಡ ಸಿನಿಮಾಗಳು ಬಿಡುಗಡೆಯಾದವು. U-turn, ಗೋಧಿ ಬಣ್ಣ ಸಾಧರಣ ಮೈಕಟ್ಟು, ಕಿರಗೂರಿನ ಗಯ್ಯಾಳಿಗಳು, ತಿಥಿ, ನೀರ್ ದೋಸೆ, ಸಿಂಪಲ್ಲಾಗ್ ಇನ್ನೊಂದ್ ಲವ್ ಸ್ಟೋರಿ, ರಿಕ್ಕಿ, ದೇವರ ನಾಡಲ್ಲಿ ಹೀಗೆ ಹಲವಾರು ಪ್ರಕಾರದ ಸಿನಿಮಾಗಳು ತೆರೆಕಂಡವು. ಯಾರಾದರು ದೇವರ ನಾಡಲ್ಲಿ ಸಿನಿಮಾ ನೋಡದೆ ಇದ್ದರೆ, ಸಿ.ಡಿ ಸಿಕ್ಕರೆ ಒಮ್ಮೆ ನೋಡಿ. ಸ್ವಲ್ಪ ನಿಧಾನ, ಆರ್ಟ್ ಮೂವೀಥರ ಇದೆ ಎನ್ನಿಸಿದರು ಸಿನಿಮಾ ಚೆನ್ನಾಗಿದೆ. ೧೯೯೩ ರ ನೈಜ ಘಟನೆ ಆಧಾರಿತ ಸಿನಿಮಾ ಎಂದು ಓದಿದ್ದೇನೆ, ನಿಶ್ಚಿತವಾಗಿ ಗೊತ್ತಿಲ್ಲ. ಬಿ. ಸುರೇಶ ಅವರ ನಿರ್ದೇಶನ.

ಹಲವಾರು ಓದುಗರ ಆಯ್ಕೆಯ ಮೇಲೆ ರಾಮ ರಾಮರೇ ಚಿತ್ರಕ್ಕೆ ಪ್ರಶಸ್ತಿ ಸಂದಿದೆ, ವೈಯಕ್ತಿಕವಾಗಿ ನನಗೂ ಬಹಳ ಹಿಡಿಸಿತು. ಚಿತ್ರದ ಹಲವು ವಿಷಯಗಳು ನನಗೆ ಇಷ್ಟವಾದವು. ಗಂಭೀರ ಮತ್ತು ಹಾಸ್ಯದ ಸಮ-ಮಿಶ್ರಣ, ಬಲವಂತವಾಗಿ ತುರುಕಿದ ಹಾಸ್ಯವೆಂದು ಎಲ್ಲಿಯೂ ಅನ್ನಿಸಲಿಲ್ಲ. “ಧರ್ಮ”ನಂತಹ ವರನ್ನು ನಿಜ ಜೀವನದಲ್ಲೂ ಅನೇಕರನ್ನು ಕಂಡಿರುತ್ತೇವೆ. ಹಲವರಿಗೆ ಅಂಥವರ ಪರಿಚಯವೂ ಇರಬಹುದು, ಸಿನಿಮಾ ನೋಡುವಾಗ ನಿಮ್ಮ ನೆನಪಿಗೂ ಬಂದಿದ್ದರೆ ಆಶ್ಚರ್ಯವಿಲ್ಲ.

ಅಪರೂಪವೆಂಬಂತೆ ಚಿತ್ರದಲ್ಲಿ ಎಲ್ಲಾ ಹಾಡುಗಳೂ ಉತ್ತಮವಾಗಿ ಮೂಡಿಬಂದಿವೆ. ಹಲವು ವರ್ಷಗಳ ನಂತರ ಸಂಗೀತ ಕಟ್ಟಿಯವರ ಧ್ವನಿಯಲ್ಲಿ ಒಂದು ಸಿನಿಮಾ ಹಾಡು ಕೇಳುವ ಸದವಕಾಶ ಸಿಕ್ಕಿದೆ. ‘ಹೊಸ ಹುಡುಗ ಹೊಸ ಹುಡುಗಿ’ ಹಾಡು ಉಲ್ಲಾಸಶೀಲವಾಗಿ ನಿರೂಪಿಸಿದ್ದಾರೆ. ‘ಕೇಳು ಕೃಷ್ಣ’ ಹಾಡಂತೂ ನನ್ನ ಮತ್ತು ನನ್ನ ಗಂಡನ ಅಚ್ಚುಮೆಚ್ಚಿನ ಗೀತೆ. ಎಲ್ಲಾದರು ಹೊರಗೆ ಹೋಗುವುದಿದ್ದರೆ, ಕಾರಲ್ಲಿ ಮೊದಲು ಚಾಲುವಾಗುವ ಹಾಡು ಅದೇ, ಈಗಲೂ.

ಚಿತ್ರದ ಇತರ ಪಾತ್ರಗಳ್ಳಲ್ಲಿಯೂ ಅರ್ಥಗರ್ಭಿತವಾದ ಸಂದೇಶಗಳಿವೆ. ಅದರಲ್ಲೂ ವದಕಾರನದ್ದು (executioner) ಪ್ರೌಢ ಮತ್ತು ವಿಷೇಶವಾದ ಪಾತ್ರ. ಒಂದು ಹಗ್ಗವನ್ನು ಸೃಷ್ಟಿ-ಸ್ಥಿತಿ-ಲಯಗಳ ಸಾಧನವನ್ನಾಗಿ ಬಳಸಿದಂತಿದೆ. ಮೊದಲಿಗೆ ಆತನಲ್ಲಿದ್ದ ಹಗ್ಗವನ್ನು, ಕೆಟ್ಟು ನಿಂತ ಲಾರಿ ಎಳೆಯಲು (ಸ್ಥಿತಿ), ನಂತರ ಆಗ ತಾನೆ ಹುಟ್ಟಿದ ಮಗುವಿಗೆ ಜೋಳಿಗೆ ಕಟ್ಟಲು (ಸೃಷ್ಟಿ),ಮತ್ತು ಕೊನೆಯಲ್ಲಿ ಸ್ಯಾಂಡಲ್ ರಾಜನನ್ನು ಗಲ್ಲಿಗೇರಿಸಲು (ಲಯ) ಉಪಯೋಗಿಸಿದ್ದೂ ಅದೇ ಹಗ್ಗವೇ. ರಾಮಣ್ಣನ ಪಾತ್ರದಲ್ಲೇ ತ್ರಿಮೂರ್ತಿಗಳನ್ನೂ ಮಾರ್ಮಿಕವಾಗಿ ಬಿಂಬಿಸಿರುವುದು ಗಮನಾರ್ಹ.

ಕೇಳು ಕೃಷ್ಣ ಹಾಡನ್ನು ಕೃಷ್ಣ-ಅರ್ಜುನರ ವಾಟ್ಸಾಪ್ ಸಂಭಾಷಣೆಯಂತೆ ನಿರೂಪಿಸಿರುವುದು ಈಗಿನ ಕಾಲಕ್ಕೆ ತಕ್ಕಂತೆ ಸೃಜನಶೀಲವಾಗಿ ಕಂಡರೂ, ಆ ಹಾಡಿನ ಸನ್ನಿವೇಶ ಸಿನಿಮಾದಲ್ಲಿ ನೋಡಿದಾಗ ಎಷ್ಟು ಅರ್ಥ ಗರ್ಭಿತವೆಂದು ತಿಳಿಯುತ್ತದೆ. ಅಂದಹಾಗೆ ಆ ವಾಟ್ಸಾಪ್ ಸಂಭಾಷಣೆಯ ಪ್ರೋಮೋ ಮಾಡಿರುವವರು ನನ್ನ ಗೆಳೆಯ ರಘುನಂದನ್ ಕಾನಡ್ಕ ಅವರು. ಸಿನಿಮಾದಷ್ಟೇ ಯಶಸ್ವೀ ಪ್ರೋಮೋ ಸೃಷ್ಟಿಸಿದ್ದಕ್ಕೆ ಅಭಿನಂದನೆಗಳು ರಘು!

ಸರಿ, ಆ ಹಾಡನ್ನ ಇನ್ನೊಮ್ಮೆ ಕೇಳೊ ಆಸೆಯಾಗ್ತಿದೆ, ನೀವೂ ಕೇಳಿ. ಇನ್ನೂ ಯಾರದರೂ ರಾಮ ರಾಮರೇ ಸಿನಿಮಾ ನೋಡದವರು ಇದ್ದರೆ, ಒಮ್ಮೆ ನೋಡಿ. ಕನ್ನಡದಲ್ಲಿ ಒಳ್ಳೆ ಸಿನಿಮಾಗಳೆ ಇಲ್ಲ ಅಂತ ಮೂಗು ಮುರಿಯೋರಿಗೂ ತೋರಿಸಿ.

– ಧರಿತ್ರೀ

Advertisements

3 thoughts on “೨೦೧೬ ನೇ ಸಾಲಿನ ನನ್ನ ಮೆಚ್ಚಿನ ಚಿತ್ರ – ರಾಮ ರಾಮರೇ

  1. ಚಿತ್ರದ ವಿಮರ್ಶೆ ತುಂಬಾ ಚೆನ್ನಾಗಿದೆ
    ಇದನ್ನು ಮುಂದುವರೆಸಿದರೆ ಉತ್ತಮ ನೀವು ಮುಂದೆ ಪ್ರಭಾವಿ ವಿಮರ್ಶೆಕರಾಗುತ್ತಿರಾ

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s