ಇವತ್ತು ಪುನೀತ್ ರಾಜ್ ಕುಮಾರ್ ಅವರ ೪೨ನೇ ಹುಟ್ಟುಹಬ್ಬ. ಹುಟ್ಟುಹಬ್ಬದ ಶುಭಾಶಯಗಳು ಅಪ್ಪು. ಇನ್ನು ಹೆಚ್ಚು ಹೆಚ್ಚು ಸಿನಿಮಾಗಳಲ್ಲಿ ನಟಿಸಿ. ನಿಮ್ಮನ್ನ ಬೆಳ್ಳಿ ಪರದೆ ಮೇಲೆ ಎಷ್ಟು ನೋಡಿದರು ನನಗಂತೂ ಸಾಕಾಗಲ್ಲ. Ok, i’m already blushing 🙂

ಅಣ್ಣವ್ರು, ಅನಂತನಾಗ್, ರಮೇಶ್ ಅಂಥಾ class actors ಒಂದು ಕಡೆ; ಆದರೆ ಕ್ಲಾಸ್ ಗೂ ಸೈ, ಮಾಸ್ ಗೂ ಸೈ ಅನ್ನೊ ಅಪ್ಪು ಮಾತ್ರ ನನಗೆ ಬಹಳ ಅಚ್ಚುಮೆಚ್ಚು. In fact, ಅಪ್ಪು ಅಂದ್ರೆ ನಂಗೊಂತರಾ ಹುಚ್ಚು 🙂 ಇಷ್ಟು ಹುಚ್ಚು ಇದ್ದ್ಮೇಲೆ ಅವರನ್ನ ಒಂದ್ಸಲನಾದ್ರು ಭೇಟಿ ಮಾಡ್ಬೇಕು ಅನ್ನೋ ತವಕ ಇರೋದಿಲ್ಲವೇ. 

ನನ್ನ ಸಹೋದ್ಯೋಗಿಯೊಬ್ಬರು, ಅಪ್ಪು-ಗೆ ಬಹಳ ಪರಿಚಯವಂತೆ. ಪೃಥ್ವಿ ಸಿನಿಮಾದ ಹಾಡುಗಳ ಬಿಡುಗಡೆ ಸಮಾರಂಭವು ಕತ್ರಿಗುಪ್ಪೆಯ ಬಿಗ್ ಬಜಾರಲ್ಲಿ ನಡೆಯಲಿದೆ, ಸಾಧ್ಯವಾದರೆ ಭೇಟಿ ಮಾಡಿಸ್ತೀನಿ ಬಾ ಅಂದಿದ್ದರು. ನಾನು, ನನ್ನ ಅತ್ತೆಯ ಮಗಳು (ಅವಳಿಗೂ ಅಪ್ಪು ಅಂದ್ರೆ ಪಂಚಪ್ರಾಣ) ಇಬ್ಬರು ಮಧ್ಯಾಹ್ನವೇ ಹೋಗಿ ಫುಡ್ ಕೋರ್ಟಿನಲ್ಲಿ ನೆಲೆಯೂರಿದೆವು. ನಿಜ ಹೇಳ್ಬೇಕಂದ್ರೆ, ಯಾವ ಮೂಲೆಯಿಂದ ಸ್ಟೇಜ್ ಚೆನ್ನಾಗಿ ಕಾಣತ್ತೆ ಅನ್ನೊ ಪರಿಶೀಲನೆ ನಡೆಸ್ತಾ ಇದ್ದ್ವಿ. ಅಪ್ಪು ಬಂದ್ರು, ಸಿನಿಮಾದ ಬಗ್ಗೆ ಮಾತಾಡಿ, ಹಾಡುಗಳನ್ನ ಬಿಡುಗಡೆ ಮಾಡುದ್ರು, ನೆರೆದಿದ್ದ ಜನರಿಗಾಗಿ ಒಂದು ಸಣ್ಣ ರಸಪ್ರಶ್ನೆ ನಡೆಸಿದ್ರು. ಸರಿಯಾಗಿ ಉತ್ತರಿಸಿ, ನನ್ನ ತಂಗಿ ಅಪ್ಪು ಕೈಯಿಂದಾನೆ ಒಂದು ಸಿ.ಡಿ. ಗೆದ್ದುಕೊಂಡ್ಲು. ಹಾಗೆ ಅವರ ಕೈ ಕುಲುಕಿ, ತನಗೊಂದು, ನನ್ಗೊಂದು ಅವರ ಆಟೋಗ್ರಾಫ್ ಹಾಕಿಸಿ ತಂದುಕೊಟ್ಟ್ಳು. ಅಷ್ಟರಲ್ಲಿ ಕಾರ್ಯಕ್ರಮ ಮುಗಿಯಿತು. ಒಂದು ಕಡೆ, ಅಪ್ಪು ಆಟೋಗ್ರಾಫ್ ಸಿಕ್ತು ಅನ್ನೊ ಖುಷಿ, ಆದರೂ ಅವರ ಕೈ ಕುಲುಕಲೂ ಆಗಲಿಲ್ಲ ಅನ್ನೋ ಬೇಜಾರು. ನನ್ನ ತಂಗಿಗೆ ಆ ಅವಕಾಶ ಸಿಕ್ಕಿಬಿಡ್ತಲ್ಲಾ ಅಂತ ಇನ್ನೂ ಬೇಜಾರು (sorry putti).

ಮುಂದೆ ಅವರದ್ದೇ ಒಂದು ಸಿನಿಮಾಗೆ ಮರ್ಕೆಟಿಂಗ್ ಮಾಡೋ ಅವಕಾಶ ಸಿಗತ್ತೆ ಅಂತ ಯಾರಿಗೆ ಗೊತ್ತಿತ್ತು. ‘ಹುಡುಗರು’ ಸಿನಿಮಾ ೨೦೧೧ ಅಲ್ಲಿ ಬಿಡುಗಡೆಯಾದಾಗ, ನಾನು ಕೆಲಸ ಮಾಡುತ್ತಿದ್ದ ಕಂಪನಿಗೆ ಮೊಬೈಲ್ ಮಾರ್ಕೆಟಿಂಗ್ ಮಾಡೊ ಕಾಂಟ್ರಾಕ್ಟ್ ಸಿಕ್ಕಿ, ಸಾಮಾಜಿಕ ಜಾಲತಾಣಗಳಲ್ಲಿ ಸಿನಿಮಾದ ಬಗ್ಗೆ ಪ್ರಚಾರ ಮಾಡುವ ಕೆಲಸ ನನಗೆ ಲಭಿಸಿತ್ತು. ಅದೇ ಸಿನಿಮಾದ ಯಶಸ್ಸನ್ನು ಆಚರಿಸಲು ಏರ್ಪಡಿಸಿದ್ದ ಕಾರ್ಯಕ್ರಮಕ್ಕೆ, ನನ್ನ ಅದೇ ಸಹೋದ್ಯೋಗಿ ಆಹ್ವಾನಿಸಿದ್ದರು. ಇಲ್ಲಿಯಾದರು ಅವರನ್ನು ಭೇಟಿ ಮಾಡುವ ಅವಕಾಶ ಸಿಗಲಿ ಅಂತ ಕನಸ್ಸು ಕಂಡಿದ್ದೇನು, ಊರಿಗೆಲ್ಲಾ ಹೇಳಿಕಂಡು ತಿರುಗಾಡಿದ್ದೇನು, ಆ ಸಂಭ್ರಮಕ್ಕೆ ಪಾರವೇ ಇಲ್ಲ. ಕೊಂಡಿದ್ದ ಹೊಸ ಬಟ್ಟೆ ಧರಿಸಿಕೊಂಡು, ಸಮಾರಂಭಕ್ಕೇನೊ ಹೊರಟೆ. ಆದರೆ ಕಾರ್ಯಕ್ರಮದ ಕೊನೆ ಮುಟ್ಟುತ್ತಿದ್ದರೂ ಅವರನ್ನು ಭೇಟಿ ಮಾಡುವ ಅವಕಾಶವೇ ಸಿಗಲಿಲ್ಲ. ಸರಿ ಇದು ನೆರವೇರುವ ಕನಸ್ಸಲ್ಲ ಅಂತ ಹೊರಗೆ ನಡೆದು ಬರುತ್ತಿದ್ದೆ. ಯಾವುದೋ ಕಾಲ್ ಸ್ವೀಕರಿಸಲು ಹೊರಗೆ ಬಂದಿದ್ದ ಅಪ್ಪು ಎದುರಿಗೇ ಸಿಕ್ಕಿ ಬಿಡೊದೇ. ನನ್ನ ಮುಖ ಎಣ್ಣೆಗೆ ಹಾಕಿದ ಹಪ್ಪಳದ ತರಹ ಅರಳಿಬಿಟ್ಟಿತ್ತು. ಅಷ್ಟರಲ್ಲಿ, ಅಲ್ಲೇ ಸಿಕ್ಕಿದ ನನ್ನ ಸಹೋದ್ಯೋಗಿಯು, ನನ್ನನ್ನು ಅವರಿಗೆ ಪರಿಚಯ ಮಾಡಿಕೊಟ್ಟರು. ಅವರ ಕೈ ಕುಲುಕಿ, ಫೋಟೊ ತೆಗೆಸಿಕೊಳ್ಳುವಷ್ಟರಲ್ಲಿ ನಾನು ಗಾಳಿಯಲ್ಲಿ ತೇಲಾಡುತ್ತಿದ್ದೆ. ಅವರ ಪಕ್ಕದಲ್ಲಿ ನಿಂತಾಗ ಮನಸ್ಸು- “ನಿನಗೆಂದೇ ವಿಷೇಶವಾದ ಮೋಹವು ನನ್ನಲ್ಲಿ, ನಿನಗಿಂತ ವಿಷೇಶವಾದ ಜೀವವು ಇನ್ನೆಲ್ಲಿ” ಅನ್ನೋ ಹಾಡು ಹಾಡಿಕೊಳ್ಳುತ್ತಿತ್ತು.

Me with appu

ಅಲ್ಲಿಗೆ, ಬಹಳ ವರ್ಷಗಳ ಆಸೆ ನೆರವೇರಿತ್ತು. ಮನೆಗೆ ಹಿಂದಿರುಗುವಾಗ ನನ್ನೊಂದಿಗೆ ಬಂದಿದ್ದ ನನ್ನ ಚಿಕ್ಕಪ್ಪ ತಿನ್ನಲು ಸ್ವಲ್ಪ ತಿಂಡಿಗಳನ್ನು ಕೊಡಿಸಿದರು. ನಾನು ಎಡಗೈಯ್ಯಲ್ಲಿ ಚಮಚ ಹಿಡಿದು ತಿನ್ನಲು ಪರದಾಡುತ್ತಿದ್ದುದನ್ನು ವಿಚಿತ್ರವಾಗಿ ನೋಡುತ್ತಿದ್ದ ಚಿಕ್ಕಪ್ಪನಿಗೆ ನಾನೇ – “ಅಪ್ಪು ಕುಲುಕಿದ ಕೈಯ್ಯಲ್ಲಿ ತಿಂದ್ರೆ, ಅದರಲ್ಲಿರೊ ಮ್ಯಾಜಿಕ್ ಹೊಟೋಗತ್ತೆ ಅದಿಕ್ಕೆ” ಅಂದು ನಕ್ಕೆ 😉 ನನ್ನ ಹುಚ್ಚಾಟಕ್ಕೆ ತಲೆ-ತಲೆ ಚಚ್ಚಿಕೊಂಡರು ಪಾಪ!

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s