ಅಂತಾರಾಷ್ಟ್ರೀಯ ಮಹಿಳಾ ದಿನದ ಶುಭಾಶಯಗಳಂದಿಗೆ ಈ ನನ್ನ ಬರಹ ಶುರು ಮಾಡ್ತೀನಿ. ನನ್ನ ತಾಯಿ, ಸೋದರಿ, ಅಜ್ಜಿ, ಗುರುಗಳು, ಸ್ನೇಹಿತೆಯರು, ಅತ್ತೆ-ಚಿಕ್ಕಮ್ಮಂದಿರು, ಎಲ್ಲರಿಗೂ ಮಹಿಳಾ ದಿನದ ಹಾರ್ದಿಕ ಶುಭಾಶಯಗಳು. ಪ್ರತ್ಯಕ್ಷವಾಗಿಯೋ, ಪರೋಕ್ಷವಾಗಿಯೊ, ನೀವೆಲ್ಲರೂ ಒಂದಿಲ್ಲೊಂದು ರೀತಿಯಲ್ಲಿ ನನ್ನ ಜೀವನದ ಮೇಲೆ ಬಹುವಾಗಿ ಪರಿಣಾಮ ಬೀರಿದ್ದೀರಿ. ಅದಕ್ಕೆ ನಾನು ಋಣಿ.

ಇವತ್ತು ಸಾಮಾಜಿಕ ಜಾಲತಾಣದ ತುಂಬ, ಕಲ್ಪನಾ ಚಾವ್ಲಾ, ಸಾನಿಯಾ ಮಿರ್ಜಾ, ಗಾಯಕಿ ಸುಬ್ಬಲಕ್ಷ್ಮೀಯವರು ಹೀಗೆ ಹಲವಾರು ಮಹಿಳಾ ಸಾಧಕರನ್ನು ಉಲ್ಲೇಖಿಸಿ ಬಹಳವಾಗಿ ಬರೆಯುತ್ತಿದ್ದಾರೆ. ಇವರೆಲ್ಲರ ಬಗ್ಗೆ ಅನಿಯಮಿತವಾಗಿ ಗೌರವವಿದೆ. ಅವರ ಸಾಧನೆಗಳ ಬಗೆಗೆ ಎರಡು ಮಾತಿಲ್ಲ. ಆದರೆ, ಒಮ್ಮೆ ಸರಿಯಾಗಿ ಗಮನಿಸಿದರೆ, ನಮ್ಮ ನೆರೆಹೊರೆಯಲ್ಲಿ ಇಂಥಾ ಎಷ್ಟೋ ಸಾಧಕರು ಸಿಗುತ್ತಾರೆ. ಅವರವರ ಮಿತಿಯಲ್ಲಿ ಗಣನೀಯ ಸಾಧನೆಯೂ ಮಾಡಿರುತ್ತಾರೆ ಮತ್ತು ನಮಗೆ ಸ್ಫೂರ್ತಿಯಾಗುತ್ತಾರೆ. ಹೀಗೆ ಹಲವು ವಿಷಯಗಳಲ್ಲಿ ನನಗೆ ಸ್ಫೂರ್ತಿಯಾದವರನ್ನು ಇಂದು ನಾನು ನೆನೆಯುತ್ತೇನೆ.  ಇವರಲ್ಲಿ ಒಬ್ಬರ ಬಗ್ಗೆ ಇಲ್ಲಿ ಹೇಳಲು ಬಯಸುತ್ತೇನೆ.

ಇದು ಸುಮಾರು ವರ್ಷಗಳ ಹಿಂದೆ ನಡೆದ ಘಟನೆ, ನನಗೆ ೮-೧೦ ವರ್ಷವಿದ್ದರೆ ಹೆಚ್ಚು. ನಮ್ಮ ಹಳೆ ಮನೆಯ ಹಿಂದೆಯೆ ಇದ್ದ ಒಬ್ಬ ಬ್ರಾಹ್ಮಣರ ಮನೆಯ ಯುವತಿ. ಬಹಳ ನೇರನುಡಿಯ ವ್ಯಕ್ತಿ, quite naturally, it didn’t go down well with a lot of her relatives and even neighbors. ಆಕೆಯೂ ಇದಕ್ಕೆಲ್ಲ ಹೆಚ್ಚು ಲಕ್ಷ್ಯ ಕೊಡುತ್ತಿರಲಿಲ್ಲ.

ಪದವಿ ಮುಗಿಸಿಕೊಳ್ಳುವಷ್ಟರಲ್ಲೆ ಅವರಿಗೆ ಒಳ್ಳೆ ಕೆಲಸವೂ ಸಿಕ್ಕಿತ್ತು. ಅಕ್ಕಪಕ್ಕದ ಮನೆಗಳಲ್ಲಿ ಎಷ್ಟೊ ಗಂಡುಮಕ್ಕಳೆ ಉದ್ಯೋಗ ಗಿಟ್ಟಿಸಿಕೊಳ್ಳಲು ಇನ್ನೂ ಪರದಾಡುತ್ತಿದ್ದರು. She was in her early twenties. ಮನೆಯಲ್ಲಿ ವರಾನ್ವೇಷಣೆ ಶುರುವಾಗಿತ್ತು. ಸಾಕಷ್ಟು ವರಪರೀಕ್ಷೆಗಳ ನಂತರ ಒಂದು ಸಂಬಂಧ ಗೊತ್ತಾಯಿತು, ಅದ್ಧೂರಿಯಾಗಿ ಮದುವೆಯೂ ನಡೆಯಿತು. ನವವಿವಾಹಿತರು ಗೋವಾಕ್ಕೆ ಹೊರಟರು. ಅಲ್ಲಿನ ಮೊದಲನೆ ರಾತ್ರಿ ಆಕೆಗೊಂದು ಆಘಾತ ಕಾದಿತ್ತು. ತಾನು ಮದುವೆಯಾದ ಹುಡುಗನಿಗೆ ತೀವ್ರವಾದ ಹೃದಯದ ಸಮಸ್ಯೆಯಿತ್ತು ಎಂಬುದನ್ನು ಅವರ ಮನೆಯವರು ಮುಚ್ಚಿಟ್ಟಿದ್ದರೆಂದು ಅವತ್ತೇ ಬೆಳಕಿಗೆ ಬಂದದ್ದು. ಆತ ಪ್ರಚೋದನೆಗೊಳಗಾಗುವಂತಿಲ್ಲ. ಆ ಸತ್ಯವನ್ನು ತಿಳಿದು ಅರಗಿಸಿಕೊಳ್ಳುವಷ್ಟರಲ್ಲೆ ಆತನ ಸ್ವಾಸ್ಥ್ಯ ಕೆಟ್ಟು ಕೈಮೀರಿತ್ತು, ಆತ ವಿಧಿವಶನಾಗಿದ್ದ.

ಸಾಮಾನ್ಯವಾಗಿ ಇಂಥಾ ಸಂದರ್ಭದಲ್ಲಿ ನಾವಾಗಿದ್ದರೆ ಏನು ಮಾಡುತ್ತಿದ್ದೆವೊ, ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಅವರು ಇಳಿದುಕೊಂಡಿದ್ದ ಹೋಟೆಲ್ ಸಿಬ್ಬಂಧಿಗಳ ಸಹಾಯ ಪಡೆದು, ಮರುದಿನ ಶವವನ್ನು ಹೇಗೊ ಬೆಂಗಳೂರಿಗೆ ವಾಪಸ್ ತಂದವರೆ, ಆ ಹುಡುಗನ ಮನೆಗೆ ತಲುಪಿಸಿ, ಇಂಥಾ ಮುಖ್ಯವಾದ ವಿಷಯವನ್ನು ಮುಚ್ಚಿಟ್ಟು ಮದುವೆ ಮಾಡಿಸಿದ್ದ ಮನೆಯವರಿಗೆ ಸರಿಯಾಗಿ ತರಾಟೆಗೆ ತೆಗೆದುಕೊಂಡರು. ಅಲ್ಲಿಂದ ಸೀದ ತಮ್ಮ ಮನೆಗೆ ಬಂದವರೆ ಎಲ್ಲಾ ವಿಷಯವನ್ನು ಮನೆಯವರಿಗೆ ತಿಳಿಸಿ, ಮರುದಿನದಿಂದಲೆ ಕೆಲಸಕ್ಕೆ ಹೋಗಲು ಪ್ರಾರಂಭಿಸಿದರು. ಕೆಲವೇ ತಿಂಗಳುಗಳಲ್ಲಿ ತಮ್ಮ ಸಹೋದ್ಯೋಗಿಯೊಬ್ಬರಿಂದ ಬಂದ ಪ್ರಸ್ತಾಪವನ್ನು ಒಪ್ಪಿ ಮದುವೆಯಾದರು. ಅವರು ಮರುವಿವಾಹವದರು ಎಂಬುದನ್ನು ನಾನು ಸಾಧನೆ ಎನ್ನುತ್ತಿಲ್ಲ, ಆದರೆ ವೃತ್ತಿಜೀವನದಲ್ಲಿ ಅವರು ಮಾಡಿರುವ ಸಾಧನೆಗೆ ಇದಾವುದೂ ಅಡ್ಡ ಬರದಂತೆ ನೋಡಿಕೊಂಡರು. ಗುಂಡಿಗೆ ಉಡುಗಿ ಹೋಗುವಂಥಾ ಸಂದರ್ಭದಲ್ಲೂ, ಸ್ಥಿಮಿತ ಕಳೆದುಕೊಳ್ಳದೆ ಅವರನ್ನವರು ನಿಭಾಯಿಸಿಕೊಂಡದ್ದು ನಿಜವಾಗಲೂ ಶ್ಲಾಘನೀಯ. ಹೊಸದಾಗಿ ಮದುವೆಯಾಗಿ ಮಧುಚಂದ್ರಕ್ಕೆ ಬಂದವರು, ಒಂದು ಇಡೀ ರಾತ್ರಿ ತನ್ನ ಗಂಡನ ಶವದೊಂದಿಗೆ ಹೇಗೆ ಕಳೆದರೋ ದೇವರೇ ಬಲ್ಲ!

ಈಗಲೂ ಅವರು ಐ.ಟಿ. ಕಂಪನಿಯೊಂದರಲ್ಲಿ ಗೌರವಾನ್ವಿತ ಸ್ಥಾನದಲ್ಲಿದ್ದಾರೆ. ಸಾಕಷ್ಟು ದೇಶಗಳನ್ನು ಸುತ್ತಿ ಬಂದಿದ್ದಾರೆ. Yet she is so simple and approachable. ಆಕೆ ಗರ್ಭಿಣಿಯಾಗಿದ್ದಾಗಲೂ ಶ್ರಮವಹಿಸಿ ಕೆಲಸ ಮಾಡುತ್ತಿದ್ದರು. ಪ್ರಸವ ವೇದನೆ ಕಾಣಿಸಿಕೊಂಡಾಗ, ತಾವೇ ಕಾರು ಚಲಾಯಿಸಿಕೊಂಡು ಆಸ್ಪತ್ರೆಗೆ ಸೇರಿದ್ದರು. ಹೆರಿಗೆಯಾದ ನಂತರ ಮನೆಯವರಿಗೆ ಫೋನ್ ಮಾಡಿ ತಿಳಿಸಿದ್ದರು.

All her life, she has portrayed how strong a woman can be, if she decides to be. I’m a great fan of hers. Wishing her all the success in life. I love you for what you are aunty! ❤

ಎರಡು ವರ್ಷಗಳ ಹಿಂದೆ ಒಂದು ಮದುವೆ ಸಮಾರಂಭದಲ್ಲಿ ಭೇಟಿಯಾಗಿದ್ದೆವು. ಈಗಲೂ ಅಷ್ಟೇ ಸ್ಫುರದ್ರೂಪಿ, ಚತುರೆ. ಒಬ್ಬ ಮಗನಿದ್ದಾನೆ, ಅವನಿಗೆ ಒಳ್ಳೆ ವಿದ್ಯಾಭ್ಯಾಸ ಕೊಡಿಸುತ್ತಿದ್ದಾರೆ. That boy must be really lucky to have mother like her. I hope he learns to respect all the women in his life and appreciate their worth in every sense.

ಅವರನ್ನು ನೆನೆಸಿಕೊಂಡಾಗಲೆಲ್ಲಾ ಕನ್ನಡದ ಧಾರವಾಹಿಯೊಂದರ ಹಾಡು ನೆನಪಾಗುತ್ತೆ – “ಆಕಾಶದೀಪವು ಹೆಣ್ಣು, ಚುಕ್ಕಿಗಳ ರಾಶಿ ಹೆಣ್ಣು ಬೆಳಗೊ ಹೆಣ್ಣಿಗೆ ಹಗಲೇ ಸಾಲದು… ಈ ಭೂಮಿ ಒಂದು ಹೆಣ್ಣು, ಭೂಮಿಯಲ್ಲು ಕೋಟಿ ಹೆಣ್ಣು, ಬಾಳೊ ಹೆಣ್ಣಿಗೆ ಭೂಮಿ ಚಿಕ್ಕದು…”

– ಧರಿತ್ರೀ

Advertisements

4 thoughts on “ಬಾಳೊ ಹೆಣ್ಣಿಗೆ ಭೂಮಿ ಚಿಕ್ಕದು…

  1. Hi … read ur blog…it was nice, short, and inspiring too… keep going… keep sharing ur thoughts through blog…

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s