ಅಮ್ಮನ ದಿನದ ನಮಸ್ಕಾರಗಳು

ಅಮ್ಮನ ದಿನದ ನಮಸ್ಕಾರಗಳು

ಮೊದಲಿಗೆ, ಎಲ್ಲಾ ಅಮ್ಮಂದಿರಿಗೂ ಅಮ್ಮನ ದಿನದ ಶುಭಾಶಯಗಳು 🙏🏼

ಆಗ ನಾನು ಎಲ್.ಕೆ.ಜಿ ಅಥವಾ ಯು.ಕೆ.ಜಿಯಲ್ಲೋ ಇದ್ದೆ. ಮೊದಲಿನಿಂದಲೂ ಓದಿನಲ್ಲಿ ನನಗೆ ಇದ್ದ ಶ್ರದ್ಧೆ ಅಷ್ಟಕ್ಕಷ್ಟೆ 😉 ಆಟದ ಮೇಲೇ ಹೆಚ್ಚು ಗಮನ. ಹೀಗೇ ಒಂದು ದಿನ ಶಾಲೆಯಿಂದ ಹಿಂದಿರುಗಿದ ಮೇಲೆ ಬೀದಿಯಲ್ಲಿ ಮಕ್ಕಳೊಂದಿಗೆ ಆಟವಾಡಲು ಹೋಗಿದ್ದೆ. ಅಮ್ಮ ಎಷ್ಟು ಬಾರಿ ಕರೆದರೂ ಅದರ ಕಡೆಗೆ ಗಮನವಿರಲಿಲ್ಲ. ಕೊನೆಗೆ ಅವರೇ ಬಂದು ಬೈದು ಮನೆಗೆ ಎಳೆದುಕೊಂಡು ಹೋದರು.

ಶಾಲೆಯಲ್ಲಿ ಕೊಟ್ಟಿದ್ದ ಮನೆ-ಪಾಠ ಮುಗಿಸುವಂತೆ ಬಲವಂತವಾಗಿ ಕೂಡಿಸಿದ್ದರು. ನನಗೋ ಆಟವಾಡಲು ಬಿಡುತ್ತಿಲ್ಲವಲ್ಲ ಅಂತ ಒಂದೇ ಸಮ ಕೋಪ ಉರಿದು ಬರುತ್ತಿತ್ತು. ಆಗೆಲ್ಲ ನಮಗೆ ಬರೆಯುವುದಕ್ಕೆ ಚಚೌಕ ಮನೆಯ ಪುಸ್ತಕಗಳು (square ruled books) ಇರುತ್ತಿದ್ದವು. ಮರುದಿನ ಉಕ್ತಲೇಖನ ಇದ್ದ ಕಾರಣ, Mother, Father, Teacher, Brother & Sister ಅನ್ನೋ ಪದಗಳನ್ನು ಹತ್ತು ಬಾರಿ ಬರೆದು ಉಕ್ತಲೇಖನಕ್ಕೆ ತಯಾರಾಗುವುದಿತ್ತು. ಅಮ್ಮನ ಮೇಲಿನ ಕೋಪಕ್ಕೆ ಎಮ್-ಓ-ಟಿ-ಎಚ್-ಈ-ಆರ್ ಮೋಟರ್… ಎಮ್-ಓ-ಟಿ-ಎಚ್-ಈ-ಆರ್ ಮೋಟರ್… ಅಂತ ಜೋರಗಿ ಹೇಳಿಕೊಂಡು ಬರೆಯಲು ಶುರು ಮಾಡಿದೆ. ಹಿಂದಿನಿಂದ ಬಂದು ನಮ್ಮಮ್ಮ ತಲೆಯ ಮೇಲೆ ಎರಡು ಬಿಟ್ಟರು. ಆ ಕ್ಷಣವೇ ಮದರ್ ಪವರ್ ಅರಿವಾಗಿ, ತಲೆಯಲ್ಲಿ ಮೋಟರ್ ಸರಿಯಾಗಿ ಓಡಲು ಶುರುಮಾಡಿತು 🤪

– ಧರಿತ್ರೀ

Advertisements

ಸುಜೋಕ್ ತೆರಪಿ…

ಸುಜೋಕ್ ತೆರಪಿ…

ತಿನ್ನೋ ವಿಷಯ ಬಂದರೆ, ನನ್ನ ಬಾಯಿಚಪಲಕ್ಕೆ ಕಡಿವಾಣ ಹಾಕೋದು ಕಷ್ಟವೇ. ಕಾಲೇಜಿನಲ್ಲಿದ್ದಾಗ, ಯಾರಾದರು ಕುರುಕು ತಿಂಡಿಗಳು ಚೆನ್ನಾಗಿರುವ ಸ್ಥಳಗಳನ್ನು ಶಿಫಾರಸು ಮಾಡಿದರೆ, ಹಿಂದು ಮುಂದು ನೋಡದೆ ಅಲ್ಲಿಗೆ ನಡೆದೇ ಬಿಡುತ್ತಿದ್ದೆವು. ಹೀಗೇ ನನ್ನ ಸಹಪಾಠಿಯೊಬ್ಬಳು ವಿಜಯನಗರದಲ್ಲಿ ಬಾನ್ಸುರಿ ಎನ್ನುವ ಅಂಗಡಿಯಲ್ಲಿ ಗೋಲ್ಗಪ್ಪ ಬಹಳ ಚೆನ್ನಾಗಿರುತ್ತೆ ಅಂದಳು. ಸರಿ, ನಾನು ಮತ್ತು ನನ್ನ ಗೆಳತಿ ಒಂದು ಭಾನುವಾರ ಅಲ್ಲಿಗೆ ಹೊರಟೇ ಬಿಟ್ಟೆವು. Continue reading “ಸುಜೋಕ್ ತೆರಪಿ…”

ಪೋಗುವೆ ಏತಕೆ ರಮಣೀ…

ಕಳೆದ ವಾರವೆಲ್ಲ ಕನ್ನಡದ ಹಳೆಯ ಸಿನಿಮಾ ಹಾಡುಗಳನ್ನು ಕೇಳುವ ಮನಸ್ಸಾಗಿತ್ತು. ಬೆರೆತ ಜೀವ ಸಿನಿಮಾದ ನನ್ನಧಾಟಿಯನೀನರಿಯೆ ಹಾಡನ್ನಂತೂ ಒಂದು ಹತ್ತು ಬಾರಿಯಾದರೂ ಕೇಳಿದೆ. ಹಾಗೇ ಹುಡುಕಿ ಹುಡುಕಿ ಹಲವಾರು ಹಾಡುಗಳನ್ನು ಕೇಳುತ್ತಿದ್ದಾಗ, ಪೋಗುವೆ ಏತಕೆ ರಮಣೀ ಹಾಡು ಕೇಳಲು ಸಿಕ್ಕಿತು. Continue reading “ಪೋಗುವೆ ಏತಕೆ ರಮಣೀ…”

ಒಂದೊಳ್ಳೆ ಕನ್ನಡ ಸಿನಿಮಾ ಸೋತುಹೋಗದಂಗೆ ದಯವಿಟ್ಟು ಗಮನಿಸಿ

ಒಂದೊಳ್ಳೆ ಕನ್ನಡ ಸಿನಿಮಾ ಸೋತುಹೋಗದಂಗೆ ದಯವಿಟ್ಟು ಗಮನಿಸಿ

ದಯವಿಟ್ಟು ಗಮನಿಸಿ ಚಿತ್ರಕ್ಕೆ ನಾ ಕಂಡ ಹಾಗೆ ಸಾಕಷ್ಟು ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಸಿನಿಮಾದ ಬಗ್ಗೆ ಬಹಳಷ್ಟು ಕಾತರ ಮೂಡಿಸಿದ್ದ ಸಿನಿಮಾದ ಹಾಡುಗಳು ಮತ್ತು ತುಣುಕುಗಳು, ಪ್ರೀಮಿಯರ್ ಶೋಗೆ ಟಿಕೆಟ್ ಖರೀದಿಸಿ ಹೋಗಲು ಪ್ರೇರೇಪಿಸಿತ್ತು. ಅಲ್ಲದೆ ಸಿನಿಮಾದಲ್ಲಿ ನನಗೆ ಮೆಚ್ಚುಗೆಯಾದ ಹಲವು ಕಲಾವಿದರಿದ್ದು, ಅವರನ್ನು ಭೇಟಿ ಮಾಡುವ ಅವಕಾಶ ಕೂಡ ದೊರಕಬಹುದೆಂದು ಪ್ರಧಾನ ಪ್ರದರ್ಶನಕ್ಕೇ ಹೋಗಿದ್ದೆವು.

ಸಂಚಾರಿ ಹಾಡು ಬಿಡುಗಡೆಯಾದಾಗಲೇ ನಾನು ಅವಿನಾಶ್ ಷಟಮರ್ಷಣ್ ಅವರ ಅಭಿನಯ ಆಶಾದಾಯಕವಾಗಿದೆ ಅಂತ ಬರೆದಿದ್ದೆ, ಸಿನಿಮಾದಲ್ಲಿ  ಅದು ನಿಜವೆನಿಸುತ್ತದೆ. Continue reading “ಒಂದೊಳ್ಳೆ ಕನ್ನಡ ಸಿನಿಮಾ ಸೋತುಹೋಗದಂಗೆ ದಯವಿಟ್ಟು ಗಮನಿಸಿ”

ಟೋಪಿ ವರ್ಗಾವಣೆ

ಒಮ್ಮೆ ಹೇಗೋ ೫೦ ರೂಪಾಯಿಯ ಖೋಟಾ ನೋಟು ನನ್ನ ಪರ್ಸ್ ಸೇರಿಕೊಂಡುಬಿಟ್ಟಿತ್ತು. ಹೇಗೆ ಬಂದಿರಬಹುದು ಅಂತ ಯೋಚಿಸುತ್ತಾ, ಬೆಳಗಿನಿಂದ ಎಲ್ಲೆಲ್ಲಿ ದುಡ್ಡು ಖರ್ಚುಮಾಡಿದೆ ಅನ್ನೋದನ್ನ ಮೆಲುಕು ಹಾಕುತ್ತಾ ಬಂದೆ. ಆಫೀಸಿನಿಂದ ಬೆಳಿಗ್ಗೆ, ಮಧ್ಯಾಹ್ನ ಮತ್ತು ಸಂಜೆ ಮೂರು ಹೊತ್ತು ಕಾಫಿ ಕುಡಿಯಲು ಹತ್ತಿರವೇ ಇದ್ದ ಹೋಟೆಲಿಗೆ ಹೋಗುವುದೊಂದು ಪದ್ದತಿಯಾಗಿಹೋಗಿತ್ತು. ಅಂದು ಬೆಳಿಗ್ಗೆಯೂ ಹೋಗಿದ್ದೆ. ಕಳ್ಳ ಆ ಹೋಟೆಲಿನವನೇ ಕೊಟ್ಟಿರೋದು ಖಚಿತವಾಗಿ ನನಗೇ ಟೋಪಿ ಹಾಕಿದ್ದಾನೆ, ನನಗೆ ಬಿದ್ದ ಟೋಪಿ ಅವನಿಗೇ ವರ್ಗಾವಣೆ ಮಾಡ್ತೇನೆ ತಡಿ ಅಂತ, ಖೋಟಾ ನೊಟನ್ನು ಜೇಬಿನಲ್ಲೇ ಇಟ್ಟುಕೊಂಡು ಮಧ್ಯಾಹ್ನವಾಗುವುದೇ ಕಾಯುತ್ತಿದ್ದೆ.

ಮಧ್ಯಾಹ್ನ ನಾನು ಮತ್ತು ಇನ್ನೊಬ್ಬ ಸಹೋದ್ಯೋಗಿ ಕಾಫಿ ಕುಡಿಯಲು ಅದೇ ಹೋಟೆಲಿಗೆ ಬಂದೆವು. ಆದರೆ ಗಲ್ಲದ ಮೇಲೆ ಬೆಳಿಗ್ಗೆ ಇದ್ದವ ಬೇರೆ, ಈಗ ಬೇರೊಬ್ಬ ಕೂತಿದ್ದಾನೆ. ಆದದ್ದು ಆಗಲಿ, ನಾನು ಖೋಟಾ ನೋಟನ್ನೇ ಅವನಿಗೆ ಕೊಡ್ತೀನಿ. ಅವನಿಗೆ ಅದು ತಿಳಿದು ಕೇಳಿದರೆ ನಿಮ್ಮ ಹೋಟೆಲಿನವರೆ ಕೊಟ್ಟಿದ್ದು ಅಂತ ಚನ್ನಾಗಿ ದಬಾಯಿಸ್ತೀನಿ ಅಂತ, ರಾಣಿ ಮಹಾರಾಣಿಯ ಮಾಲಾಶ್ರೀಯನ್ನು ನೆನೆಸಿಕೊಂಡು ಮನಸ್ಸಿನಲ್ಲೇ ಜಗಳಕ್ಕೆ ಸಿದ್ಧಳಾದೆ. ಊಟದ ಸಮಯವಾದ್ದರಿಂದ ಗಲ್ಲದ ಹತ್ತಿರ ಚೀಟಿ ಪಡೆಯಲು ಜನ ಕಿಕ್ಕಿರಿದಿದ್ದರು. ಆತ ಖೋಟಾ ನೋಟನ್ನು  ಗಮನಿಸುವುದು ಕಷ್ಟವೇ ಅಂದುಕಂಡು ಎರಡು ಕಾಫಿಗೆ ಚೀಟಿ ಕೇಳಿದೆ. ನೋಟು ಪಡೆದ ತಕ್ಷಣ ಆತ ಒಂದು ಮುಗುಳ್ನಗೆ ಬೀರಿದ. ನಾ ಕೊಟ್ಟಿದ್ದು ಅಸಲಿ ನೋಟಲ್ಲವೆಂದು ಅವನಿಗೆ ತಿಳಿದು ಹೋಯಿತೇ ಅಂತ ಸ್ವಲ್ಪ ಭಯವಾಗಿ ಅಲ್ಲಿಂದ ತಕ್ಷಣ ಕಾಫಿ ತೊಗೊಂಡು ಹೊರಗೆ ಬಂದು ನಿಂತೆ. ನನ್ನ ಸಹೋದ್ಯೋಗಿಯನ್ನು ಮಾತಿಗೆಳೆಯುತ್ತಾ, ಬೆಳಿಗ್ಗೆ ಗಲ್ಲದಲ್ಲಿ ಕೂತವ ಬೇರೆ ಅಲ್ಲವಾ ಅಂದೆ. ತಕ್ಷಣ ಅವರು ಇಂದು ಬೆಳಿಗ್ಗೆ ನಾವು ಯಾವುದೋ ಸಮ್ಮೇಳನಕ್ಕೆ ಹೋಗಿದ್ದು, ಕಾಫಿ ಕುಡಿಯಲು ಇಲ್ಲಿ ಬಂದೇ ಇರಲಿಲ್ಲ, ಬೆಳಿಗ್ಗೆ ಇದ್ದವ ಯಾರು ಅಂತ ಹೇಗೆ ಗೊತ್ತಾಗುತ್ತೆ ಅಂದರು. ನನಗೆ ಬಹಳ ಕಸಿವಿಸಿಯಾಗಿಹೋಯಿತು.

ಮತ್ತೆ ಈ ಖೋಟಾ ನೋಟು ನನಗೆ ಎಲ್ಲಿ ಜೋತುಬಿತ್ತಪ್ಪ ಅಂತ ನೆನಪಿಸಿಕೊಳ್ಳಲು, ಆಫೀಸಿಗೆ ಅಂದು ಆಟೋದಲ್ಲಿ ಬಂದದ್ದು ನೆನಪಾಗಿ ಆ ಚಾಲಕನ ಮೇಲೆ ವಿಪರೀತ ಸಿಟ್ಟು ಏರಿತು. ಹಿಡಿಹಿಡಿ ಶಾಪ ಹಾಕುತ್ತಾ, ಅವನು ನನಗೆ ಟೋಪಿ ಹಾಕಿದ, ನಾನು ಈ ಹೋಟೆಲಿನವನಿಗೆ ವರ್ಗಾಯಿಸಿದ, ಇವನು ಇನ್ನ್ಯಾರಿಗೋ ಅಂದುಕೊಂಡು ಆಫೀಸಿಗೆ ತಿರುಗಿ ನಡೆದೆ. ಆದರೂ ಯಾಕೋ ಮನಸ್ಸಿಗೆ ಸಮಾಧಾನವಾಗಲಿಲ್ಲ. ನನಗೆ ಯಾರೋ ಮೋಸ ಮಾಡಿದರು ಅಂತು ನಾನು ಬೇರೆ ಯಾರಿಗೋ ಮೋಸ ಮಾಡಿದೆನಲ್ಲಾ ಅಂತ ಅಪರಾಧಿಭಾವ ಕಾಡತೊಡಗಿತು. ಸಂಜೆ ಮನೆಗೆ ಹೋಗುವ ದಾರಿಯಲ್ಲಿ ರಾಯರ ಗುಡಿಗೆ ಹೋಗಿ, ೧೦೦ ರೂಪಾಯಿ ಹುಂಡಿಗೆ ಹಾಕಿ, ಮಾಡಿದ ತಪ್ಪಿಗೆ ಕ್ಷಮೆ ಕೇಳಿ ಒಂದು ನಮಸ್ಕಾರ ಹಾಕಿ ಮನೆಗೆ ಹೊರಟೆ. ಸ್ವಲ್ಪ ಸಮಾಧಾನವಾಯಿತು.

ಮುಂದಿನ ಎರಡು ಮೂರು ದಿನ ಹೋಟೆಲಿಗೆ ಹೋಗಲು ಮುಜುಗರ, ಆದರೂ ತಲೆ ತಪ್ಪಿಸಿಕೊಂಡು ಹೇಗೋ ಕಾಫಿ ಕುಡಿದು ಬರುತ್ತಿದ್ದೆ. ಒಮ್ಮೆ ನಾನೆ ಕಾಫಿಗೆ ಚೀಟಿ ಕೊಳ್ಳಲು ಹೋಗಬೇಕಾಯಿತು. ನನ್ನ ಗ್ರಹಚಾರಕ್ಕೆ ಅಲ್ಲಿ ಆತನೇ ಇರಬೇಕೆ? ಸ್ವಲ್ಪ ಹಿಂಜರಿಕೆಯಲ್ಲೇ ಹೋಗಿ ೪ ಕಾಫಿ ಕೊಡಿ ಅಂದೆ. ಅವನು ನಗುತ್ತಾ, ಮೇಡಂ ಅವತ್ತು ಒಂದು ೫೦ರೂ ನೋಟು ಕೊಟ್ಟ್ರಲ್ಲ, ಅದು ಯಾಕೊ ಅಸಲಿ ಅಲ್ಲಾ ಅನ್ಸ್ತು, ಆದ್ರೂ ಪಾಪಾ ನೀವ್ಯಾಕೆ ನಕಲಿ ನೋಟು ಕೊಡ್ತೀರ, ನಿಮ್ಮ ಹತ್ತಿರಾನೂ ಗೊತ್ತಿಲ್ಲದೆ ಬಂದಿರಬಹುದು ಅಂತ ನಾನೆ ಇಟ್ಟುಕೊಂಡೆ ಅಂದ. ಇದೆಲ್ಲಿಗೆ ಬಂತಪ್ಪ, ೫೦ ರೂಪಾಯಿಗೆ ಮಾನ ಹೋಗ್ತಿದೆ ಅಂದುಕೊಳ್ಳುವಷ್ಟರಲ್ಲಿ ಆತನೇ ಮುಂದುವರೆಸಿದ. ಆ ನೋಟಿಗೆ ಮೇಣ ಮೆತ್ತಿತ್ತಂತೆ ಮೇಡಂ, ಅದು ಖೋಟಾ ನೋಟಲ್ಲ ಅಂದ್ರು ಬ್ಯಾಂಕಿನವರು ಅಂದ. ದೀರ್ಘ ನಿಟ್ಟುಸಿರು. ಹಲ್ಲು ಗಿಂಜುತ್ತಾ ಕಾಫಿ ಚೀಟಿ ಇಸ್ಕೊಂಡು ಬಂದೆ.

ಆದರೆ ಈ ಕಿರಿಕಿರಿ ಇಲ್ಲಿಗೆ ನಿಲ್ಲಲಿಲ್ಲ. ಅನಾವಶ್ಯಕವಾಗಿ, ಖೋಟಾ ನೋಟು ಕೊಟ್ಟಿದ್ದಾನೆಂದು ಆಟೋ ಚಾಲಕನ್ನ ಬೈದುಕೊಂಡದ್ದಕ್ಕೆ ಬೇಸರ ಶುರುವಾಯ್ತು. ಕೊನೆಗೆ ಸಂಜೆ ಮತ್ತೆ ರಾಯರ ಗುಡಿಗೆ ಹೋಗಿ ಒಂದು ಡೀಲ್ ಮಾಡಿಕೊಂಡು ಬಂದೆ. ನಾನು ಹುಂಡಿಗೆ ಹಾಕಿದ್ದ ೧೦೦ ರೂಪಾಯಿಯಲ್ಲಿ, ಹೋಟೆಲಿನವನಿಗೆ ಖೋಟಾ ನೋಟು ಕೊಟ್ಟ ಅಪರಾಧಿಭಾವಕ್ಕೆ ೫೦, ಆಟೋ ಚಾಲಕನನ್ನು ಬೈದುಕೊಡಿದ್ದಕ್ಕೆ ಮಿಕ್ಕ ೫೦ ತಪ್ಪು ಕಾಣಿಕೆ ಅಂತ. 😛

– ಧರಿತ್ರೀ

ಒಂದು ಮೊಟ್ಟೆಯ ಕಥೆ – Bald is beautiful

ಒಂದು ಮೊಟ್ಟೆಯ ಕಥೆ – Bald is beautiful

ಸಿನಿಮಾ ಶೀರ್ಷಿಕೆಯೇ ಸೀದಾ ಸಾದಾ ವಿಷಯ ಏನೆಂದು ಹೇಳುತ್ತೆ, ಬೋಳು ತಲೆಯೊಬ್ಬರ ಕಥೆಯಿದು ಅಂತ. ಸಿನಿಮಾದ ಪ್ರಚಾರ ತುಣುಕು ತುಂಬಾ ತಮಾಷೆಯಾಗಿತ್ತು, ಖಂಡಿತ ನೋಡ್ಬೇಕು ಅಂತ ಆಗಲೇ ಅನ್ನಿಸಿತ್ತು. ಸರಿ ನೆನ್ನೆ ಭಾನುವಾರ, ಸಿನಿಮಾ ನೋಡೋಕೆ ಹೋಗಿದ್ದ್ವಿ. ಒಂದು ಮೊಟ್ಟೆಯ ಕಥೆ ಸಿನಿಮಾ ನೋಡಕ್ಕೆ ಬಂದಿದ್ದೀವಿ ಅಂತ ಮುಖಪುಸ್ತಕದ ಗೋಡೆಯಮೇಲೆ ಬರೆದಿದ್ದೆ. ಸುಮಾರು ತೊಂಬತ್ತು ಜನ ಆ ಸ್ಟೇಟಸ್ಸನ್ನು ಲೈಕ್ ಮಾಡಿದ್ದಾರೆ. ನಾ ಸಿನಿಮಾ ನೋಡೋಕೆ ಹೋಗಿದ್ದೀನಿ ಅಂದ್ರೆ ಇಷ್ಟು ಜನಕ್ಕೆ ಯಾಕಪ್ಪ ಸಂತೋಷ ಅಂದ್ಕೋಡ್ರಾ? ವಿಷಯ ಅದಲ್ಲ, Continue reading “ಒಂದು ಮೊಟ್ಟೆಯ ಕಥೆ – Bald is beautiful”

ಇಂಗ್ಲೀಷ್ ಅವಾಂತರ

ಸುಮಾರು ದಿನಗಳ ಹಿಂದೆ “ನಾಟಿ ಕೊತ್ತಂಬರಿ” ಕಥೆ ಹೇಳಿದಾಗಲೆ ಬರೆದಿದ್ದೆ, ಕಾಲೇಜಿನಲ್ಲಿದ್ದಾಗ ಹೀಗೇ ಇಂಗ್ಲೀಷಿನಿಂದ ಕನ್ನಡಕ್ಕೆ ಭಾಷಾಂತರ ಮಾಡಲು ಹೋಗಿ ಆಗಿದ್ದ ಅವಾಂತರದ ಬಗ್ಗೆ ಬರೀತೀನಿ ಅಂತ. ಕೊನೆಗೂ ಕೂತು ಬರೆಯೊಕೆ ಪುರುಸೊತ್ತಾಯಿತು.

ಬೆಂಗಳೂರಿಗರು ನಾವೆಲ್ಲ “ನವೆಂಬರ್ ಕನ್ನಡಿಗರು” ಆಗಿ ಹೋಗಿದ್ದೀವಿ ಅಂತ ಈಗೆಲ್ಲ ಪೇಚಾಡ್ತೀವಿ. ಆದರೆ ನಾವು ಕಾಲೇಜಿನಲ್ಲಿದ್ದಾಗಲೇ ಕನ್ನಡ ಬಳಕೆಯನ್ನ ಹೆಚ್ಚಿಸೋದು ಹೇಗೆ ಅನ್ನೋದರ ಬಗ್ಗೆ ಗಂಭೀರವಾಗಿ ಚರ್ಚಿಸುತ್ತಿದ್ದೆವು. Continue reading “ಇಂಗ್ಲೀಷ್ ಅವಾಂತರ”